Oedipus complex
ನಾಮವಾಚಕ

(ಮನಶ್ಶಾಸ್ತ್ರ) ಈಡಿಪಸ್‍ (ಮನೋ)ವಿಕಾರ:

  1. ಹ್ರಾಯ್ಡ್‍ ಎಂಬ ಮನೋವಿಶ್ಲೇಷಣಶಾಸ್ತ್ರಜ್ಞನ ಮತ್ತು ಅವನ ಪಂಥದವರ ಅಭಿಪ್ರಾಯದಂತೆ, 3 ರಿಂದ 6 ವರ್ಷ ವಯಸ್ಸಿನ ಅವಧಿಯಲ್ಲಿ ಒಂದು ಮಗುವಿನ (ಮುಖ್ಯವಾಗಿ ಗಂಡುಮಗುವಿನ) ಮನಸ್ಸಿನಲ್ಲಿ ತನ್ನ ತಾಯಿತಂದೆಗಳ ಪೈಕಿ ಭಿನ್ನಲಿಂಗದ ವ್ಯಕ್ತಿಯಲ್ಲಿ (ಮುಖ್ಯವಾಗಿ ತಾಯಿಯಲ್ಲಿ) ಅನುರಾಗವು, ಸಲಿಂಗ ವ್ಯಕ್ತಿಯಲ್ಲಿ (ತಂದೆಯಲ್ಲಿ, ತನಗೆ ಪ್ರತಿಸ್ಪರ್ಧಿಯೆಂಬ ಭಾವನೆಯಿಂದ) ದ್ವೇಷವೂ ಹುಟ್ಟುವಂತೆ ಮಾಡುವ ಮನಃಪ್ರವೃತ್ತಿ.
  2. 3 ರಿಂದ 6 ವರ್ಷ ವಯಸ್ಸಿನ ಅವಧಿಯಲ್ಲಿ ಒಂದು ಮಗುವಿನ ಮನಸ್ಸಿನಲ್ಲಿ ತನ್ನ ಮಾತಾಪಿತೃಗಳ ಪೈಕಿ ಸಲಿಂಗದ ವ್ಯಕ್ತಿಯಲ್ಲಿ (ತನಗೆ ಪ್ರತಿಸ್ಪರ್ಧಿಯೆಂಬ ಭಾವನೆಯಿಂದ) ಹುಟ್ಟಿದ ದ್ವೇಷವನ್ನು ಶಿಕ್ಷೆಯ ಭಯದಿಂದ ಅದುಮಿ ಇಟ್ಟುಕೊಂಡಿದ್ದರಿಂದ ವಯಸ್ಕ ಸ್ಥಿತಿ ಬಂದ ಮೇಲೂ ಒಳಗೆ ಉಳಿದುಕೊಂಡಿರುವ ಮಾನಸಿಕ ರೋಗ.